You are currently viewing Viral video old man applying hand sanitizer on his hands legs and even head | ಕೊರೋನಾ ಭಯ; ದೇಹಕ್ಕೆ ಮಾತ್ರವಲ್ಲ ತಲೆಕೂದಲಿಗೂ ಸ್ಯಾನಿಟೈಸರ್​ ಹಂಚಿಕೊಂಡ ತಾತಾ
Viral-video-old-man-applying-hand-sanitizer-on-his-hands

Viral video old man applying hand sanitizer on his hands legs and even head | ಕೊರೋನಾ ಭಯ; ದೇಹಕ್ಕೆ ಮಾತ್ರವಲ್ಲ ತಲೆಕೂದಲಿಗೂ ಸ್ಯಾನಿಟೈಸರ್​ ಹಂಚಿಕೊಂಡ ತಾತಾ

Viral Video: ಕೊರೋನಾ ಭಯ: ಕೈ, ಕಾಲು ಮಾತ್ರವಲ್ಲ ತಲೆಕೂದಲಿಗೂ ಸ್ಯಾನಿಟೈಸರ್​ ಹಚ್ಚಿಕೊಂಡ ತಾತಾ

ಕೊರೋನಾ ಭಯ

ಕೊರೋನಾ ಸೋಂಕು ಪ್ರತಿಯೊಬ್ಬರಲ್ಲೂ ಭಯ ಮೂಡಿಸಿದೆ. ಸೋಂಕಿನಿಂದ ರಕ್ಷಣೆಗೆ ಕೈ ತೊಳೆಯುವುದು, ಸಾಮಾಜಿಕ ಅಂತರ ಕಾಪಾಡುವುದು, ಮಾಸ್ಕ್​ ಧರಿಸುವುದು ಕಡ್ಡಾಯವಾಗಿದೆ. ಅದರಲ್ಲೂ ಹೊರಗೆ ಹೋದಾಗ ಯಾವುದೇ ವಸ್ತು ಮುಟ್ಟಿದಾಗ ಸ್ಯಾನಿಟೈಸರ್​ನಿಂದ ಕೈ ಶುಚಿ ಮಾಡಿಕೊಳ್ಳುವುದು ಈಗ ತಪ್ಪದ ಅಭ್ಯಾಸವಾಗಿ ಹೋಗಿದೆ. ಇಲ್ಲೊಬ್ಬ ವ್ಯಕ್ತಿ ಕೂಡ ಸ್ಯಾನಿಟೈಸರ್​ನಿಂದ ಕೈ ಮಾತ್ರವಲ್ಲದೇ ಇಡೀ ದೇಹವನ್ನೇ ಶುದ್ದಿ ಮಾಡಿಕೊಳ್ಳುವ ಮೂಲಕ ಗಮನಸೆಳೆದಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದ್ದು, ಜನರ ಈ ತಾತನ ಅತಿ ಕಾಳಜಿ ಕಂಡು ಬೆರಗಾಗಿದ್ದಾರೆ. ಐಪಿಎಸ್​ ಅಧಿಕಾರಿ ರುಪಿನ್​ ಶರ್ಮಾ ಕೂಡ ಈ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಯಾವುದೋ ಆಸ್ಪತ್ರೆ ಅಥವಾ ಕಚೇರಿಯಲ್ಲಿ ಸಾಮಾಜಿಕ ಅಂತರ ಪಾಲನೆ ಮಾಡಿಕೊಂಡು ಕುಳಿತಿರುವ ತಾತಾನ 50 ಸೆಕೆಂಡ್​ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಿದೆ. ತಾತಾನ ಅಲ್ಲಿನ ವ್ಯಕ್ತಿಯೊಬ್ಬರಿಗೆ ಸ್ಯಾನಿಟೈಸರ್​ ನೀಡುವಂತೆ ಮನವಿ ಮಾಡಿದ್ದಾರೆ. ಆ ವ್ಯಕ್ತಿ ತಾತಾನಿಗೆ ಮಾತ್ರ ಸ್ಯಾನಿಟೈಸರ್​ ನೀಡಲು ಮುಂದಾದಗ ಕೇಳಿ ಕೊಂಚ ಹೆಚ್ಚೆ ಪಡೆದ ತಾತಾ ಅದನ್ನು ಅಂಗೈ ಮಾತ್ರವಲ್ಲದೇ ಸಂಪೂರ್ಣ ಕೈ, ಕಾಲು, ಮುಖ ಮಾತ್ರವಲ್ಲದೇ ತಲೆಗೂ  ಹಚ್ಚಿಕೊಂಡಿದ್ದಾರೆ. ಕೊರೋನಾ ಸೋಂಕಿನ ಭಯ ತಾತಾನಿಗೆ ಯಾವ ಪರಿ ಇದೆ ಎಂಬುದನ್ನು ಈ ವಿಡಿಯೋ ತೋರಿಸಿದೆ.

ಈ ವಿಡಿಯೋವನ್ನು ಹಚ್ಕೊಂಡಿರುವ ಐಪಿಎಸ್​ ಅಧಿಕಾರಿ, ತಾತಾ ತಲೆ ಕೂದಲಿಗೆ ಸ್ಯಾನಿಟೈಸರ್​ ಹಚ್ಚಿದರೆ ಓಡಿ ಹೋಗಲ್ಲ. ಮಾಸ್ಕ್​ ಅನ್ನು ಸರಿಯಾಗಿ ಧರಿಸಿ ಎಂದು ಟ್ವೀಟ್​ ಮಾಡಿದ್ದಾರೆ.  ಈ ವಿಡಿಯೋ ಎಲ್ಲಿಯದು ಏನು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿದಿಲ್ಲ. ಆದರೆ, ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಇನ್ನು ದೇಶದಲ್ಲಿ ಕೊರೋನಾ 2ನೇ ಅಲೆ ತಗ್ಗುತ್ತಿದ್ದು, ಲಸಿಕೆ ಅಭಿಯಾನ ಸಮರೋಪಾದಿಯಲ್ಲಿ ನಡೆಯುತ್ತಿದೆ. ಈವರೆಗೂ ಕೇಂದ್ರದಿಂದ ರಾಜ್ಯಗಳಿಗೆ 25.60 ಕೋಟಿ ಡೋಸ್ ಹಂಚಿಕೆಯಾಗಿದೆ. ಈವರೆಗೂ 24.44 ಕೋಟಿ ಡೋಸ್ ಬಳಕೆಯಾಗಿದೆ. ರಾಜ್ಯಗಳಲ್ಲಿ ಸದ್ಯ 1.17 ಕೋಟಿ ಡೋಸ್ ಬಳಕೆಗೆ ಲಭ್ಯವಿದೆ. ಇನ್ನು ಮೂರು ದಿನಗಳಲ್ಲಿ 38 ಲಕ್ಷ ಡೋಸ್ ಹಂಚಿಕೆಯಾಗಕಲಿದೆ. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಹಂಚಿಕೆ ಮಾಡಲಾಗುವುದು ಎಂದು ಕೇಂದ್ರ ಆರೋಗ್ಯ ಇಲಾಖೆಯಿಂದ ಮಾಹಿತಿ ನೀಡಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.


Published by:
Seema R


First published:
June 11, 2021, 10:15 PM IST


Viral video old man applying hand sanitizer on his hands legs and even head | ಕೊರೋನಾ ಭಯ; ದೇಹಕ್ಕೆ ಮಾತ್ರವಲ್ಲ ತಲೆಕೂದಲಿಗೂ ಸ್ಯಾನಿಟೈಸರ್​ ಹಂಚಿಕೊಂಡ ತಾತಾ
#Viral #video #man #applying #hand #sanitizer #hands #legs #ಕರನ #ಭಯ #ದಹಕಕ #ಮತರವಲಲ #ತಲಕದಲಗ #ಸಯನಟಸರ #ಹಚಕಡ #ತತ

More on Sharechat